“ರಕ್ಷಾ ಫೌಂಡೇಷನ್” ಎಂಬ ಹೆಸರಿನ ಸಂಸ್ಥೆಯೊಂದನ್ನು ಕಳೆದ 5 ವರ್ಷಗಳ ಹಿಂದೆ ಪ್ರಾರಂಭಿಸುವುದರೊಂದಿಗೆ ಕಳಕಳಿಯ ಸಾಮಾಜಿಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುತ್ತೇವೆ.
ಈ ವರ್ಷವೂ ಸರ್ಕಾರಿ ಹಾಗೂ ಸರ್ಕಾರಿ ಮಾನ್ಯತೆ ಪಡೆದ ಶಾಲೆಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗಳಿಗೆ ಸಹಾಯ ಮಾಡುವುದು ಈ ಸಂಸ್ಥೆಯ ಉದ್ದೇಶವಾಗಿದೆ.
1) 80,000 ಪುಸ್ತಕಗಳನ್ನು 6,000 ವಿದ್ಯಾಥಿಗಳಿಗೆ ವಿತರಣೆ ಮಾಡಲಾಗುವುದು.
2) ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 22 ವಿದ್ಯಾರ್ಥಿಗಳಿಗೆ ಪ್ರತೀಭಾ ಪುರಸ್ಕರ ವಿತರಣೆ
3) 24 ಶಾಲೆಗಳಿಗೆ ನೀರು ಶುದ್ಧೀಕರಣ ಯಂತ್ರ ವಿತರಣೆ
4) 3 ವಿಕಲಚೇತನ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ವಿತರಣೆ
5) ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಗೆ 1,00,000/- ರೂ. ಚೆಕ್ನ್ನು ಮಕ್ಕಳ ಹೃದಯ ಸಂಬಂಧಿ ಖಾಯಿಲೆಗೆ ಧಾನ ನೀಡುವುದು.
ಈ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು, ಮಾನ್ಯ ಕೇಂದ್ರ ಸಚಿವರಾದ ಶ್ರೀ ಅನಂತಕುಮಾರ್ರವರು, ಮಾನ್ಯ ಶಾಸಕರುಗಳಾದ ಶ್ರೀ.ಆರ್.ಅಶೋಕರವರು ಮತ್ತು ಶ್ರೀ ಬಿ.ಎನ್. ವಿಜಯಕುಮಾರ್ರವರು ಮತ್ತು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ತಾರಾಅನೂರಾಧರವರು ಮತ್ತು ಪೂಜ್ಯ ಮಹಾಪೌರರಾದ ಶ್ರೀ ಬಿ.ಎನ್.ಮಂಜುನಾಥ ರೆಡ್ಡಿರವರು ಆಗಮಿಸುತ್ತಾರೆ. ಆದ್ದರಿಂದ ತಾವು ಸಂಪೂರ್ಣ ಸಹಕಾರ ಹಾಗೂ ತಮ್ಮ ಪತ್ರಿಕೆಗಳಲ್ಲಿ ಮತ್ತು ಟಿ.ವಿ. ಮಾದ್ಯಮದಲ್ಲಿ ಪ್ರಕಟಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇನೆ.